ಧರ್ಮಸಾಧನಮ್ (- Natural Meditation) - Masth Knowledge
Responsive Ads Here

Monday, 9 January 2023

ಧರ್ಮಸಾಧನಮ್ (- Natural Meditation)


ಧರ್ಮಸಾಧನಮ್ (- Natural Meditation)


ಅನಾದಿಕಾಲದಿಂದಲೂ ಭಾರತ ದೇಶದ ಮೂಲ ನಿವಾಸಿಗಳಿಗೆ ಅವರ ಖುಷಿ, ಮುನಿಗಳಿಂದ ಕೊಡಲ್ಪಟ್ಟಿರುವ ಜೀವನ ವಿಧಾನವನ್ನು ಸನಾತನ ಧರ್ಮವೆಂದು ಕರೆಯಲ್ಪಟ್ಟಿದೆ. ಸನಾತನ ಎಂದರೆ ಶಾಶ್ವತ ಅಥವಾ ನಿರಂತರ ಮತ್ತು ಧರ್ಮ ಎಂದರೆ ಜೀವನ ವಿಧಾನ. ಇದರಿಂದ ಸನಾತನಧರ್ಮ ಎಂದರೆ ಒಂದು ಶಾಶ್ವತ ರೀತಿಯ ಜೀವನ ವಿಧಾನ ಮತ್ತು ಸಂಸ್ಕೃತಿ. ಇದನ್ನೇ ವಾಯುವ್ಯದಿಂದ ದಂಡೆತ್ತಿ ಬಂದ ಶಕ್ತಿಗಳು ಸಿಂಧೂನದಿಯಿಂದ ಈಚೆಗಿರುವ ಸಂಸ್ಕೃತಿಯನ್ನು ಹಿಂದೂ ಎಂದು ಕರೆಯುತ್ತಾ, ಅದೇ ವಾಡಿಕೆಯಾಗಿ ಬಂದು ಬಿಟ್ಟಿತು. ನಿಜಕ್ಕೂ ಹಿಂದೂಧರ್ಮ ಎಂಬ ಹೆಸರು ಯಾವುದೇ ನಮ್ಮ ಪುರಾಣ, ಇತಿಹಾಸಗಳಲ್ಲಿ ಕಂಡುಬರುವುದಿಲ್ಲ. ಇದು ಇತ್ತೀಚೆಗೆ ಚಾರಿತ್ರಿಕವಾಗಿ ಸನಾತನಧರ್ಮಕ್ಕೆ ಕೊಡಲ್ಪಟ್ಟಿರುವ ಒಂದು ಹೆಸರು ಅಷ್ಟೇ.


ಸನಾತನ ಧರ್ಮವು ಅನಾದಿಕಾಲದಿಂದಲೂ ಭಾರತೀಯ ಜೀವನದ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಈ ಜೀವನ ವಿಧಾನವನ್ನು ಇತ್ತೀಚಿನ ಧರ್ಮಗಳಂತೆ ಯಾವುದೇ ಒಂದು ವ್ಯಕ್ತಿಯಿಂದ ಅಥವಾ ಪ್ರವಾದಿಯಿಂದ ಪ್ರತಿಪಾದಿಸಿದುದಲ್ಲ.


ಇತ್ತೀಚಿನ ಚಾರಿತ್ರಿಕ ಧರ್ಮಗಳನ್ನು ಒಬ್ಬ ಪ್ರವಾದಿಯು ತನ್ನ ಅನುಯಾಯಿಗಳಿಗೆ ನಿರ್ದಿಷ್ಟ ರೀತಿಯಲ್ಲಿ ಜೀವನ ವಿಧಾನದ ಆದೇಶವನ್ನು ಕೊಟ್ಟಿರುತ್ತಾನೆ ಮತ್ತು ಅದಕ್ಕೆ ತಪ್ಪಿದಲ್ಲಿ ಶಿಕ್ಷೆಗಳನ್ನು ವಿಧಿಸಿರುತ್ತಾನೆ. ಆದರೆ ಸನಾತನ ಧರ್ಮವು ಯಾವುದೇ ಒಬ್ಬ ವ್ಯಕ್ತಿಯಿಂದ ಅಥವಾ ಪ್ರವಾದಿಯಿಂದ ಪ್ರತಿಪಾದಿಸಿದುದಲ್ಲ. ಇದು ಕೇವಲ ನಮ್ಮ ಅನಂತ ಸಂತ, ಋಷಿ, ಮುನಿಗಳ ದೈವಿಕ ಚಿಂತನೆಯ ಪರಂಪರೆಯಾಗಿರುತ್ತದೆ. ಆದ್ದರಿಂದ ಸನಾತನಧರ್ಮದಲ್ಲಿ ಆಧ್ಯಾತ್ಮಿಕ ಸ್ವಾತಂತ್ರ್ಯವು ಬಹಳವಾಗಿರುತ್ತದೆ ಮತ್ತು ಅದು ಕೇವಲ ವ್ಯಕ್ತಿಯ ಇಷ್ಟಕ್ಕೆ ಒಳಪಟ್ಟಿದ್ದಾಗಿರುತ್ತದೆ.

ಸನಾತನಧರ್ಮವು ನಾಲ್ಕು ತತ್ವಗಳ ಆಧಾರದ ಮೇಲೆ ಪ್ರತಿಪಾದಿಸಲ್ಪಟ್ಟದೆ. ಅದೇನೆಂದರೆ ಧರ್ಮ, ಕರ್ಮ, ಪುನರ್ಜನ್ಮ ಮತ್ತು ಮೋಕ್ಷ .

ಧರ್ಮ ಎಂದರೆ ಮಾನವನು ಎಲ್ಲಾ ರೀತಿಯಲ್ಲೂ ಪ್ರಕೃತಿಗೆ ಅನುಗುಣವಾಗಿ ಸನ್ಮಾರ್ಗದಲ್ಲಿ ಜೀವನವನ್ನು ನಡೆಸುವುದು. ಅದೇನೆಂದರೆ ಪ್ರೇಮ, ದಯೆ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಹಿಂಸೆ ಮಾಡದಿರುವುದು (ಆತ್ಮರಕ್ಷಣೆಯ ಮತ್ತು ಸಂದರ್ಭದಲ್ಲಿ ಬಿಟ್ಟು), ಮೋಸ ಮಾಡದಿರುವುದು, ಸುಳ್ಳು ಹೇಳದಿರುವುದು, ಒಪ್ಪಿಕೊಂಡ ಮತ್ತು ಕೊಡಲ್ಪಟ್ಟಿರುವ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುವುದು, ದಾನ ಧರ್ಮಗಳನ್ನು ಅವಲಂಭಿಸುವುದು, ಆಧ್ಯಾತ್ಮಿಕ ಚಿಂತನೆಗಳಾದ ಭಕ್ತಿ, ಧ್ಯಾನ ಮುಂತಾದ ಸಾಧನೆಗಳನ್ನು ಅವಲಂಭಿಸುವುದು. ಈ ರೀತಿ ಸಾತ್ವಿಕವಾಗಿ ಜೀವನ ನಡೆಸುವುದೇ ಧರ್ಮಬದ್ಧವಾದ ಜೀವನ. ಧರ್ಮಬದ್ಧವಾಗಿ ಜೀವನ ನಡೆಸಿದರೆ ಕರ್ಮ ಉಂಟಾಗುವುದಿಲ್ಲ.

ಕರ್ಮ ಎಂದರೆ ಮಾನವನು ಮಾಡುವ ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳ ಪ್ರತಿಫಲ. ಕರ್ಮ ಬಂಧನದಲ್ಲಿ ಸಿಲುಕದಿದ್ದರೆ ಪುನರ್ಜನ್ಮ ಉಂಟಾಗುವುದಿಲ್ಲ, ಏಕೆಂದರೆ ಕರ್ಮವೇ ಪುನರ್ಜನ್ಮಕ್ಕೆ ನಾಂದಿ. ಕರ್ಮಬಂಧನದಲ್ಲಿ ಸಿಲುಕಿಕೊಂಡ ವ್ಯಕ್ತಿ ಪುನರ್ಜನ್ಮಗಳಿಗೆ ಒಳಗಾಗಿ ಜನ್ಮಜನ್ಮಾಂತರಗಳಲ್ಲಿ ಕರ್ಮದ ಪ್ರತಿಫಲಗಳನ್ನು ಅನುಭವಿಸುವನು.


ಧರ್ಮಮಾರ್ಗದಲ್ಲಿ ಸಾಗುವವನಿಗೆ ಕರ್ಮ ಉಂಟಾಗುವುದಿಲ್ಲ, ಕರ್ಮವಿಲ್ಲದಿದ್ದಲ್ಲಿ ಆತ್ಮ ಸ್ವರೂಪಿಯಾದ ವ್ಯಕ್ತಿ ಚೈತನ್ಯವು, ವಿಶ್ವಚೈತನ್ಯವಾದ ಪರಮಾತ್ಮನಲ್ಲಿ ಲಯವಾಗುವುದು. ಇದೇ ಮೋಕ್ಷ. ಹೇಗೆ ಉಗಮವಾದ ನದಿಯು ಸತತವಾಗಿ ಹರಿಯುತ್ತಾ ಕೊನೆಗೆ ಸಮುದ್ರವನ್ನು ಸೇರಿ ತನ್ನನ್ನು ತಾನು ಸಮುದ್ರದಲ್ಲಿ ಲಯ ಮಾಡಿಕೊಂಡು ಇನ್ನಿಲ್ಲವಾಗಿ ಸ್ಥಿರತ್ವವನ್ನು ಪಡೆಯುವುದೋ ಹಾಗೇ. ಇದೇ ಸನಾತನ ಧರ್ಮದ ನಾಲ್ಕು ಸ್ಥಂಭಗಳಾದ ಧರ್ಮ, ಕರ್ಮ, ಪುನರ್ಜನ್ಮ ಮತ್ತು ಮೋಕ್ಷ.

ಆದರೆ ಇತ್ತೀಚೆಗೆ ಈ ಸನಾತನ ಧರ್ಮವು (ಹಿಂದೂಧರ್ಮ) ಪೂರ್ತಿಯಾಗಿ ನಶಿಸುತ್ತಾ ಬಂದಿದೆ. ಈಗ ಸನಾತನ ಧರ್ಮವು ಅಥವಾ ಹಿಂದೂ ಧರ್ಮವು ಕ್ಲಿಷ್ಟಪರಿಸ್ಥಿತಿಯಲ್ಲಿದೆ ಏಕೆಂದರೆ ಶೇಕಡ 70ರಷ್ಟು ಹಿಂದೂಗಳು ಯಾವುದೇ ದೈವಸಾಧನೆಯಿಲ್ಲದೆ ಕೇವಲ ಹೆಸರಿಗೆ ಮಾತ್ರ ಹುಟ್ಟಿನಿಂದ ಹಿಂದೂಗಳಾಗಿರುವರು. ಇದೇ ನಮ್ಮ ಸನಾತನಧರ್ಮದ ಅವನತಿಗೆ ಕಾರಣವಾಗಿದೆ. ಈಗ ಸನಾತನ ಧರ್ಮವು ICUನಲ್ಲಿದೆ ಅಂದರೆ ತಪ್ಪಾಗಲಾರದು. ಈಗ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವೇನೆಂದರೆ ಸನಾತನ ಧರ್ಮವನ್ನು ಅಥವಾ ಹಿಂದು ಧರ್ಮವನ್ನು ಭಾರತ ದೇಶದ ಏಳಿಗೆಗಾಗಿ ಮತ್ತು ಪ್ರಪಂಚದ ಉಳಿವಿಗಾಗಿ ಈ ಧರ್ಮವನ್ನು ಉಳಿಸಿಕೊಳ್ಳಬೇಕಾಗಿದೆ.


ಈಗ ಹಿಂದೂಗಳು ತಮ್ಮ ಸತ್ಯಯುಗದ ಮೂಲ ತತ್ವವಾದ ಮನೋಜ್ಞವಾದ ಜಪ (ಮಾನಸಿಕವಾಗಿ ದೇವರ ಜಪ) ಮತ್ತು ತಪಸ್ಸನ್ನು (ಆಂತರಿಕವಾದ ದೇವರ ಧ್ಯಾನವನ್ನು) ಮರೆತು ಕಾಲಾಂತರದಲ್ಲಿ ಸಾಕಾರಗೊಂಡ ಕೇವಲ ಬಹಿರ್ಮುಖ ಪೂಜೆ, ಅಭಿಷೇಕಗಳು ಮತ್ತು ಯಜ್ಞ ಯಾಗಗಳಲ್ಲಿ ಸಿಲುಕಿಕೊಂಡು ಕೇವಲ ಸ್ವಕಲ್ಯಾಣ ಮತ್ತು ಲೋಕಕಲ್ಯಾಣಗಳಿಗೆ ಸೀಮಿತವಾಗಿರುವ ಈ ಬಹಿರ್ಮುಖ ಸಾಧನೆಗಳಿಗೆ ಒಳಗಾಗಿ, ಪ್ರತಿ ಮಾನವನು ಪರಮಾತ್ಮನೊಂದಿಗೆ ನೇರವಾಗಿ ಸ್ವಯಂ ಅನುಸಂಧಾನವಾಗುವ (ಹೊಂದಾಣಿಕೆ) ಸಾಧನೆಗಳಿಂದ ಬಹಳ ದೂರ ಉಳಿದುಕೊಂಡು ಸನಾತನ ಧರ್ಮವನ್ನು ಅವನತಿಸ್ಥಿತಿಗೆ ತಂದಿದ್ದಾರೆ. ಸನಾತನ ಧರ್ಮದ ಮೂಲ ಸಿದ್ಧಾಂತವಾದ ಅಂತರ್ಮುಖವಾಗದ ಹೊರತು ಆತ್ಮ, ಪರಮಾತ್ಮಗಳ ಅನುಭವ ಮತ್ತು ಅನುಸಂಧಾನವಾಗುವುದಿಲ್ಲ ” ಎನ್ನುವುದನ್ನು ಮರೆತಿದ್ದಾರೆ. ಆದ್ದರಿಂದ ಸನಾತನ ಧರ್ಮದ ಪುನ‌ ಉದ್ಧಾರವನ್ನು ಅಂತರ್ಮುಖ ಯಜ್ಞವಾದ ತಪಸ್ಸಿನ (ಜಪ/ಧ್ಯಾನ ದ ) ಮೂಲಕ ಮಾಡಬೇಕಾಗಿದೆ.

ಋತಂ ತಪಃ, ಸತ್ಯಂ ತಪಃ, ಶೃತಂ ತಪಃ, ಶಾಂತಂ ತಪೋ ದಮಸ್ತಪಃ, ಶಮಸ್ತಪೋ, ದಾನಂ ತಪೋ, ಯಜ್ಞ ತಪೋ, ಭೂರ್ಭುವಃಸುವ ಬ್ರಹ್ಮತದುಪಾಳ್ಯ ತತ್ತಪಃ | - ಮಹಾನಾರಾಯಣ ಉಪನಿಷದ್.


ತಪಸ್ಸೇ ಸತ್ಯವು ; ತಪಸ್ಸೇ ಶಾಂತಿಃಯು ; ತಪಸ್ಸೇ ಯಜ್ಞವು ; ತಪಸ್ಸೇ ದಾನವು : ತಪಸ್ಸೇ ಭೂಮಿ ಸ್ವರ್ಗಾದಿಗಳು : ತಪಸ್ಸೇ ಸರ್ವವೂ.


ತಪಸಾ ಪ್ರಾಪ್ಯತೇ ಸ್ವರ್ಗಃ ತಪಸಾ ಪ್ರಾಪ್ಯತೇ ಯಶಃ ಆಯುಃ ಪ್ರಕರ್ಶ೦ ಭೋಗಾಸ್ತು ತಪಸಾ ವೀದತೇ ಮಹತ್ ಜ್ಞಾನ ವಿಜ್ಞಾನ ಮಾಸ್ತಿಕ್ಯಂ ಸೌಭಾಗ್ಯಂ ರೂಪಮುತ್ತಮಂ ತಪಸಾ ಪ್ರಾಪ್ಯತೇ ಸರ್ವಂ ಯಂಚಿನ್ಮಸೇತಂ ||


ತಪಸ್ಸು ಆಯುಸ್ಸನ್ನು ಹೆಚ್ಚಿಸುವುದು ; ಸುಖಸಂಪತ್ತುಗಳನ್ನು ಒದಗಿಸುವುದು ; ಶಾಂತಿಗೆ ಮೂಲವಾಗುವುದು. ಜ್ಞಾನ, ವಿಜ್ಞಾನ ಮತ್ತು ಭಗವತ್ ಸಾಕ್ಷಾತ್‌ಕಾರಕ್ಕೆ ದಾರಿತೆಗೆಯುವುದು. ಸ್ವರ್ಗಮೋಕ್ಷಾದಿಗಳಿಗೆ ಕಾರಣವಾಗುವುದು.


ತಪಸೋಹಿ ಪರಂ ನಾಸ್ತಿ ತಪಸಾ ವಿಂದತೇ ॥ ತಪಸ್ಸಿಗಿಂತ ಉತ್ತಮವಾದ ಆಧ್ಯಾತ್ಮಿಕ ಸಾಧನೆಯಿಲ್ಲ.


ತಸ್ಮಿನ್ ಸ್ತಾವ ತಪಃ ಕುರಿಯಾದ್ ದ್ಯಾವತ್ ತುಷ್ಟಿಕರಂ ಭವೇತ್ ಯಂಚಿದೇನಃ ಕುರುವಂತೆ ಮನೋ ವಾಕ್ ಕರ್ಮವಿಜ್ಜನಃ || - ವಿಷ್ಣುಧರ್ಮೋತ್ತರ ಪುರಾಣ, ಮನೋ ವಾಕ್ ಕರ್ಮಗಳಿಂದ ಮಾಡಿದ ಪಾಪಗಳನ್ನು ತಪಸ್ಸು ಶುದ್ಧಿಗೊಳಿಸುತ್ತದೆ.


ಸರ್ವಂ ತತ್ ತವಸಾ ಸಾಧ್ಯಂ ತಪಸ್ಸಿನಿಂದ ಎಲ್ಲವೂ ಸಾಧ್ಯ


ಭಗವಾನ್ ಶ್ರೀಕೃಷ್ಣನು ಧರ್ಮವನ್ನು ಉಳಿಸುವ ಸೂತ್ರವನ್ನು ಅರ್ಜುನನಿಗೆ ಮಾಡುವ ಉಪದೇಶದ ಮೂಲಕ ಪ್ರತಿಯೊಬ್ಬ ಮಾನವನು ಎಲ್ಲಾ ಕಾಲದಲ್ಲೂ, ಎಲ್ಲಾದರೂ, ಯಾವಾಗಲಾದರೂ ಮಾನಸಿಕವಾಗಿ ಮಾಡಬಹುದಾದ ಅತಿಮುಖ್ಯ ಸೂತ್ರವನ್ನು “ಯಜ್ಞಾನಾಂ ಜಪಯಜ್ಯೋಸಿ” ಎಂದು ಬೋಧಿಸಿರುವನು. ಅರ್ಥಾತ್ ಮಾನವನು ಮಾಡುವ ದೈವಸಾಧನೆಗಳಲ್ಲಿ ಮಾನಸಿಕ ಜಪಯಜ್ಞವು ತಾನೇ ಎಂದು ಹೇಳಿರುವನು.

ನಿಮಗೆ ಅತ್ಯಂತ ಇಷ್ಟವಾದ ಸನಾತನ ದೇವರುಗಳಲ್ಲಿ ಒಂದು ನಾಮವನ್ನು (ಹೆಸರನ್ನು) 20 ತೆಗೆದುಕೊಂಡು ಒಂದು ಜಪ ಮಾಲೆಯನ್ನು ಹಿಡಿದು ನಿಮ್ಮ ಕೈಲಾದಷ್ಟು ಆ ನಾಮದ ಜಪವನ್ನು ಮಾಡಿರಿ. ಜಪಮಾಲೆಯಿಲ್ಲದೆ ಮನಸ್ಸಿನಲ್ಲೇ ಭಗವಂತನ ನಾಮವನ್ನು ಮನನ ಮಾಡುವುದೇ ಧ್ಯಾನ.


ಇಷ್ಟೇ ಅಲ್ಲದೆ ಶ್ರೀಕೃಷ್ಣನು ಕಲಿಯುಗದಲ್ಲಿ ಸನಾತನ ಧರ್ಮವು ಉಳಿಯುವುದು ಕಷ್ಟಸಾಧ್ಯ ಎಂದು ಅರಿತು ಒಂದು ಮುಖ್ಯವಾದ ಎಚ್ಚರಿಕೆಯನ್ನು ಕೊಟ್ಟಿರುವನು. ಅದೇನೆಂದರೆ ಗುಣ್ಯವಿಷಯಾ ವೇದ ನಿಗುಣೋ ಭವಾರ್ಜುನ ನಿರ್ದ್ವಂನಿತ್ಯಸತ್ವ ನಿರ್ಯೋಗಕ್ಷೇಮ ಆತ್ಮವಾನ್ ಅರ್ಜುನನ ಮೂಲಕ ಸನಾತನ ಧರ್ಮೀಯರನ್ನು ಸಂಭೋದಿಸುತ್ತಾ “ ಅರ್ಜುನಾ, ತ್ರಿಗುಣಗಳಾದ ಸತ್ವ, ರಜೋ, ತಮೋ ಗುಣಗಳಿಗೆ ಸೀಮಿತವಾಗಿರುವ ವೇದಗಳ ಆಚರಣೆಗಳಲ್ಲಿ ಬಂಧಿತನಾಗಬೇಡ (ವೇದಗಳ ಆಚರಣೆ ಪುಣ್ಯಪ್ರಾಪ್ತಿ ಮತ್ತು ಮಾನವ ಕಲ್ಯಾಣಕ್ಕೆ ಸೀಮಿತ). ಈ ತ್ರಿಗುಣಗಳನ್ನೂ ದಾಟಿ ನಿರ್ವಿಕಾರವಾಗಿ ದ್ವಂದ್ವಗಳಾದ ಸುಖಃ ದುಃಖಗಳನ್ನು ದಾಟು (ಜಪ, ಧ್ಯಾನಗಳ ಮೂಲಕ).ಈಗ ಸನಾತನ ಧರ್ಮೀಯರು ಬಹಿರ್ಮುಖ ಸಾಧನೆಗಳ ಜೊತೆಗೆ ಮುಖ್ಯವಾಗಿ ಮಾನಸಿಕವಾಗಿ ಮಾಡುವ ಯಜ್ಞವಾದ ಜಪ, ಧ್ಯಾನ ಇವುಗಳನ್ನು ಅವಲಂಭಿಸಿ ವಿಶ್ವಚೈತನ್ಯವಾದ ಆ ಪರಮಾತ್ಮನೊಂದಿಗೆ ಅನುಸಂಧಾನವಾಗಿ(align), ಆ ದೈವಚೈತನ್ಯವನ್ನು ಭೂಮಿಗೆ ಅನುಸಂಧಾನವಾಗಿಸಿ ಆ ಪರಮಾತ್ಮನೇ ಈ ಸನಾತನ ಧರ್ಮವನ್ನು ಉಳಿಸುವಂತೆ ಮಾಡಬೇಕಾಗಿದೆ. ಇದೇ ಪ್ರತಿಯೊಬ್ಬ ಹಿಂದೂವಿನ


ವೇದೇಷು ಯಜೇಷು ತಪಃಸು ಚೈವ ದಾನೇಷು ಯತ್ಪುಣ್ಯಫಲಂ ಪದಿಷ್ಟಮ್ । ಅತೈತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನ ಮುಪೈತಿ ಚಾದ್ಯಮ್ ॥ ಯೋಗೀಪುರುಷರು ವೇದ, ಯಜ್ಞಗಳ ಪಾಲನೆ ಇವುಗಳ ರಹಸ್ಯವನ್ನು ತಿಳಿದುಕೊಂಡು, ಅವುಗಳನ್ನೆಲ್ಲಾ ದಾಟಿಹೋಗಿ (ಭಕ್ತಿ, ಧ್ಯಾನಗಳಿಂದ) ಸನಾತನನಾದ ಪರಮಾತ್ಮನನ್ನು ಸೇರುತ್ತಾರೆ.


ಆಗ ನೀನು ನನ್ನೊಂದಿಗೆ ಅನುಸಂಧಾನವಾಗಿ ಶಾಶ್ವತವಾದ ಶಾಂತಿಯನ್ನು ಪಡೆಯುವ (ಮೋಕ್ಷವನ್ನು ಪಡೆಯುವೆ) ಮುಖ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದುವು ತಮ್ಮ ಕರ್ತವ್ಯವೆಂಬಂತೆ ಮಾನಸಿಕವಾಗಿ ಪರಮಾತ್ಮನ ಆರಾಧನೆಯನ್ನು ಅವಲಂಭಿಸಿ (ಜಪ, ಧ್ಯಾನಗಳ ಮೂಲಕ) ದೈವಚೈತನ್ಯವನ್ನು ಸನಾತನ ಧರ್ಮದ ಉಳಿವಿಗಾಗಿ ಧರೆಗಿಳಿಸುವಂತೆ ಮಾಡಬೇಕಾಗಿದೆ. ಆದ್ದರಿಂದ ಸನಾತನ ಧರ್ಮದ ಪುನ‌ ಉದ್ಧಾರವನ್ನು ಧರ್ಮಜಾಗೃತಿಯ ಮೂಲಕ ಮಾಡಬೇಕಾಗಿದೆ. ಎಲ್ಲಾ ಸಾತ್ವಿಕ ಸಾಧನೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಜಪಯಜ್ಞವು (ಧ್ಯಾನವು) ನಾನೇ ಆಗಿರುವೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಾರಿರುವನು. ದೇವರ ನಾಮ ಅಥವಾ ಗುಣವನ್ನು ಮನನ (ರಿಪೀಟ್) ಮಾಡುವುದೇ ಜಪ. ಜಪವು ಮೂರು ವಿಧಗಳಾಗಿರುವುದೆಂದು ವೇದಗಳು ಈ ಕೆಳಕಂಡಂತೆ ಉಲ್ಲೇಖಿಸಿದೆ. ವಿಧಿಯಜ್ಞಾ ಜಪಯಜ್ಯೋ ವಿಶಿಷ್ಟೋ ದಶಾಭಿರ್ಗುಣೋ । ಉಪಾಂಶು: ಸ್ಯಾಛತ್ಯುಣಃ। ಸಹಸ್ರೋ ಮಾನಸಃ ಸ್ಮೃತಃ ॥


No comments:

Post a Comment

Post Top Ad

Your Ad Spot