ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು
ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫)[ಬದಲಾಯಿಸಿ]
ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.
ಚಂಪಾರಣ್ ಮತ್ತು ಖೇಡಾ[ಬದಲಾಯಿಸಿ]
- ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು.
- ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು.
- ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ನ ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.
- ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.
- ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.
- ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು.
- ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.
ಅಸಹಕಾರ ಅಂದೋಲನ[ಬದಲಾಯಿಸಿ]
- ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು.
- ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು ಬ್ರಿಟಿಷ್ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು.
- ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.[೧೭] ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
- ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ಸ್ವರಾಜ್ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.
- ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.
- ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.[೧೮]
- 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.
- ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.
- ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.[೧೯] ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
- ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.
- ಒಂದೆಡೆ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
- ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.[೨೦]
ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ)[ಬದಲಾಯಿಸಿ]
- ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.
- ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್ ಸೈಮನ್ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
- ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರ್ ಲಾಲ್ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.[೨೧] ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
- ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
- ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.
- ಲಾರ್ಡ್ ಎಡ್ವರ್ಡ್ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್ ತಿಂಗಳಲ್ಲಿ ಗಾಂಧಿ-ಇರ್ವಿನ್ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.
- ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.
- ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.
- ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.[೨೨] ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.
- ಪ್ರಮುಖ ಮುಖಂಡರಾದ ಬಿ. ಆರ್. ಅಂಬೇಡ್ಕರ್ ರವರು ಗಾಂಧಿಯವರು ಬಳಸಿದ ಹರಿಜನ್ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.
- ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
- ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
- ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.[೨೩] ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.
- ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್ ಕಾಂಗ್ರೆಸ್ ಪಕ್ಷವನ್ನು ತೊರೆದರು.[



No comments:
Post a Comment